ಸುದ್ದಿಗಳು

ದಸರಾಕ್ಕೆ ಬರಲಿದ್ದಾನೆ ‘ಯುವರತ್ನ’

ಬೆಂಗಳೂರು,ಜ.14: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರುತ್ತಿರುವ ಹೊಸ ಚಿತ್ರ ‘ಯುವರತ್ನ.. ಈಗಾಗಲೇ ಶೀರ್ಷಿಕೆ ವಿನ್ಯಾಸ ಬಿಡುಗಡೆಯಾಗಿ ಸೌಂಡ್ ಮಾಡಿತ್ತು..

ನಾವು ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸುತ್ತೇವೆ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ಕುಮಾರ್ ಅವರ ಎರಡನೇ ಚಿತ್ರ, ಯುವ ರತ್ನ, ಈ ವರ್ಷ ದಸರಾಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ… ಸಂತೋಷ್ ಆನಂದ್ ರಾಮ್ ಹೇಳುವಂತೆ “ನಾವು ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸುತ್ತೇವೆ ಮತ್ತು ದಸರಾ ಬಿಡುಗಡೆಗೆ ಎದುರು ನೋಡುತ್ತಿದ್ದೇವೆ. ವಿಭಿನ್ನ ಹಿನ್ನೆಲೆಯಿಂದ ಬಂದ 200 ಕ್ಕೂ ಹೆಚ್ಚು ಹೊಸ ಪ್ರತಿಭೆಗಳನ್ನು ನಾವು ಆಡಿಷನ್ ಮಾಡಿ ಮತ್ತು ಆಯ್ಕೆ ಮಾಡಿಕೊಳ್ಳಲಿದ್ದೇವೆ, ಎಂದಿದ್ದಾರೆ..

Image may contain: 1 person, smiling, sunglasses, text and closeup

ಇದೊಂದು ಯೂತ್ ಸ್ಟೋರಿ

ಸುಮಾರು 16 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಈ ಚಿತ್ರದಲ್ಲಿ ಮತ್ತೆ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ. ಇದೊಂದು ಯೂತ್ ಸ್ಟೋರಿಯಾಗಿರುವುದರಿಂದ ಈ ಚಿತ್ರಕ್ಕೆ ‘ಯುವರತ್ನ’ ಎಂದು ಹೆಸರಿಡಲಾಗಿದೆಯಂತೆ. ಜೊತೆಗೆ ‘ಯುವರತ್ನ’ನಾದ ಪವರ್ ಸ್ಟಾರ್ ಪುನೀತ್ ಅವರ ಚಿತ್ರಕ್ಕೆ ತಮನ್ನಾ  ನಾಯಕಿ ಎಂದು ಹೇಳಲಾಗುತ್ತಿದೆ..

Tags