ಸುದ್ದಿಗಳು

ಸಂಭಾವನೆ ಹೆಚ್ಚಿಸಿಕೊಂಡ ಸರಿಗಮಪ ಖ್ಯಾತಿಯ ಹನುಮಂತಪ್ಪ

ಬೆಂಗಳೂರು, ಜ.21:

ಸರಿಗಮಪ ವೇದಿಕೆ ಅದೆಷ್ಟೋ ಹಾಡುಗಾರರಿಗೆ ಸ್ಥಳಾವಕಾಶ ಮಾಡಿ ವೃತ್ತಿ ಜೀವನ ನೀಡಿದೆ. ಪ್ರತಿಯೊಂದು ಸೀಸನ್ ನಲ್ಲೂ ಒಳ್ಳೊಳ್ಳೆ ಹಾಡುಗಾರರನ್ನು ನೀಡಿದೆ.‌ ಅವರಿಗೆ ವೃತ್ತಿ ಆರಂಭಕ್ಕೆ ಮಾರ್ಗದರ್ಶನ ತೋರಿಸಿದರು. ಇದೀಗ ಸರಿಗಮಪ ಸ್ಪರ್ಧೆ ಈ ಆವೃತ್ತಿಯಲ್ಲೂ ಕೂಡ ಎಲೆ ಮರೆಯ ಕಾಯಿಗಳೆಂತೆ ಇರುವ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆದಿದೆ. ಈ ಎಲೆ ಮರೆ ಕಾಯಿಗಳಲ್ಲಿ ಹನುಮಂತಪ್ಪ ಕೂಡ ಒಬ್ಬರು.

ಮುಗ್ದತೆಯಿಂದಲೇ ಗಮನ ಸೆಳೆದ ಸ್ಪರ್ಧಿ

ತಮ್ಮದೇ ಆದ ಶೈಲಿ, ತಮ್ಮದೇ ಆದ ಭಾವನೆ, ಮಕ್ಕಳ ಮನಸ್ಸು, ನೇರ ಮಾತು, ಹಳ್ಳಿ ಸೊಗಡು ಹೀಗೆ ಎಲ್ಲದರಿಂದಲೂ ಹೆಸರು ಮಾಡಿದ ಸ್ಪರ್ಧಿ. ಇವರ ಹಾಡು ಅನ್ನೋದಕ್ಕಿಂತ ಮುಖ್ಯವಾಗಿ ಅವರ ಮುಗ್ದತೆ ಇಂದಿಗೂ ಇಷ್ಟ. ಎಲ್ಲೋ ಹಳ್ಳಿಯ ಮೂಲೆಯಲ್ಲಿದ್ದ ಈ ಹಾಡುಗಾರ ಇಂದು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ ಅಂದರೆ ಅದಕ್ಕೆ ಕಾರಣ ವೇದಿಕೆ ಕೊಟ್ಟ ಜೀ ಕನ್ನಡ ಸರಿಗಮಪ ಸ್ಪರ್ಧೆ. ಇದೀಗ ಈ ಮುಗ್ದ ಹಾಡುಗಾರ ತನ್ನ ಸಂಭಾವನೆ ಹೆಚ್ವಿಸಿಕೊಂಡಿದ್ದಾರೆ.

ಸಂಭಾವನೆ ಹೆಚ್ಚಿಸಿದ ಸರಿಗಮಪ ಸ್ಪರ್ಧಿ..?

ಹೌದು, ಸರಿಗಮಪ ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳಿಗೆ ವಾರಕ್ಕೆ ಇಂತಿಷ್ಟು ಹಣವನ್ನು ಸಂಭಾವನೆಯಾಗಿ ನೀಡುತ್ತಾರೆ. ಅದೇ ರೀತಿ ಹನುಮಂತಪ್ಪ ಅವರಿಗೆ 10 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅವರ ಸಂಭಾವನೆ 25 ರಿಂದ 30 ಸಾವಿರಕ್ಕೆ ಏರಿಕೆಯಾಗಿದೆಯಂತೆ. ಈಗಾಗಲೇ ಸ್ಪರ್ಧೆಯಲ್ಲಿಯೇ ಅವಕಾಶ ಗಿಟ್ಟಿಸಿಕೊಂಡ ಹನುಮಂತಪ್ಪ ಇದೀಗ ಮತ್ತೆ ದಾಖಲೆ ಬರೆದಿದ್ದಾರೆ.

#sandalwood #zeekannadasingingrealityshow #sarigamapaseason15 #zeekannadacontestantshanumanthappa #balkaninews

Tags

Related Articles