ಸುದ್ದಿಗಳು

ಸಾಲು ದೀಪಗಳ ಹಬ್ಬಕ್ಕೆ ನಿಮ್ಮ ಮನೆಗೆ ಬರಲಿದೆ ಜೀ ಕನ್ನಡ ವಾಹಿನಿ ಕುಟುಂಬ

ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ 2018

ಬೆಂಗಳೂರು, ನ.02: ಪ್ರತಿ ಬಾರಿಯೂ ಹಬ್ಬಕ್ಕಾಗಿ ಜೀ ಕನ್ನಡ ವಾಹಿನಿಯ ವಿಶೇಷ ಏನು ಎಂಬ ಕುತೂಹಲ ಪ್ರೇಕ್ಷಕರಲ್ಲಿ  ಇರುತ್ತದೆ. ಅದಕ್ಕೆ ತಕ್ಕಂತೆಯೇ ವಾಹಿನಿ ಕೂಡ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ಈ ಬಾರಿಯೂ ದೀಪಾವಳಿಗಾಗಿ ಕಲರ್ ಫುಲ್ ಕಾರ್ಯಕ್ರಮ ರೂಪಿಸಿದೆ. ಪ್ರೇಕ್ಷಕರೊಟ್ಟಿಗೇ ದೀಪಾವಳಿ ಆಚರಿಸಲು ಜೀ ಕನ್ನಡ ವಾಹಿಯ ಕುಟುಂಬವೇ ನೋಡುಗರ ಮನೆಬಾಗಿಲಿಗೆ ಹೊರಟಿದೆ. ಅದು `ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್ 2018′ ರ ಮೂಲಕ.ಪ್ರಶಸ್ತಿಗೆ ಮತ್ತಷ್ಟು ಮೆರುಗು ತಂದ ಕಲಾವಿದರು

ಈಗಾಗಲೇ ಹಬ್ಬಕ್ಕಾಗಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಪ್ರೊಮೋಗಳು ರೆಡಿಯಾಗಿವೆ. ಆಗಲೇ ಅವುಗಳು ಪ್ರೇಕ್ಷಕರಿಗೆ ಸಖತ್ ಕುತೂಹಲ ಕೂಡ ಮೂಡಿಸುತ್ತಿವೆ. ಈ ಮಧ್ಯೆ ಪ್ರತಿ ವರ್ಷ ನಡೆಯುವ ಜೀ ಕುಟುಂಬದ ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ `ಜೀ ಕುಟುಂಬ ಅವಾರ್ಡ್ಸ್  2018′ ರ ಕಾರ್ಯಕ್ರಮ ಕೂಡ ಸಿದ್ಧವಾಗಿದೆ. ವಾಹಿನಿಯ ಕುಟುಂಬದ ಸದಸ್ಯರಾದ ಧಾರಾವಾಹಿ, ರಿಯಾಲಿಟಿ ಶೋಗಳ ಕಲಾವಿದರು ಮತ್ತು ತಂತ್ರಜ್ಞರು, ರಿಯಾಲಿಟಿ ಶೋಗಳು ನಿರ್ಣಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಮನರಂಜನೆಗಾಗಿ ಹತ್ತಾರು ಕಾರ್ಯಕ್ರಮಗಳು, ನೂರಾರು ಕಲಾವಿದರು, ಅವರ ಕುಟುಂಬದ ಸದಸ್ಯರು, ಕೇವಲ ಕಿರುತೆರೆಯ ಕಲಾವಿದರು ಮಾತ್ರವಲ್ಲ, ಸ್ಯಾಂಡಲ್‍ ವುಡ್ ಸಿಲಿಬ್ರಿಟಿಗಳು ಕೂಡ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಸಾವಿರಾರು ಕಲಾವಿದರು ಮತ್ತು ತಂತ್ರಜ್ಞರು ಸಾಕ್ಷಿಯಾದ ವೇದಿಕೆ ಕೂಡ ಕುಟುಂಬದಂತೆ ಕಂಡಿದೆ.

ನೋಡುಗರ ಗಮನ ಸೆಳೆದ ಜೀ ಕನ್ನಡ ಅವಾರ್ಡ್ಸ್

ಪ್ರಶಸ್ತಿ ವಿಜೇತರು ಮತ್ತು ಅವರಿಗೆ ಗೌರವಿಸಲು ಆಗಮಿಸಿದ್ದ ಸ್ಯಾಂಡಲ್‍ವುಡ್ ಸ್ಟಾರ್‍ಗಳ ಮಾತುಕತೆ, ಸಿನಿಮಾ ಮತ್ತು ಕಿರುತೆರೆ ಕಲಾವಿದರು ವಿವಿಧ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಲಿವೆ.

ಧಾರಾವಾಹಿನೋ ಅಥವಾ ರಿಯಾಲಿಟಿ ಶೋಗಳ ಕಲಾವಿದರನ್ನು ಆಯಾ ಕಾರ್ಯಕ್ರಮಗಳಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯ. ಆದರೆ, ಈ ಎಲ್ಲರನ್ನೂ ಒಟ್ಟಾಗಿಸಿದ ಹೆಮ್ಮೆ ಜೀ ಕುಟುಂಬ ಅವಾರ್ಡ್ಸ್ ನದ್ದು. ಎಲ್ಲರೂ ಒಟ್ಟಾಗಿದ್ದರಿಂದ ಡಬಲ್ ಮನರಂಜನೆ ಕೂಡ ಇಲ್ಲಿದೆ.

ವರ್ಷಪೂರ್ತಿ ಸಾಧನೆ ಮಾಡಿದ ಸಾಧಕರ ಶ್ರಮ, ಅವರನ್ನು ಸನ್ಮಾನಿಸಿದ ಸಂತೃಪ್ತಿ ಮತ್ತು ತಮ್ಮ ಶ್ರಮಕ್ಕೆ ಸಂದ ಗೌರವಕ್ಕಾಗಿ ಸಾಧಕರ ಭಾವುಕ ನುಡಿಗಳು ಖುಷಿ ಕಂಬನಿಯಾಗಿ ಇಳಿದಿವೆ. ಈ ಭಾವುಕ ಕ್ಷಣವೇ ಜೀ ಕುಟುಂಬ ಅವಾರ್ಡ್ಸ್ ಗೆ ಸಿಕ್ಕ ದೊಡ್ಡ ಜಯ.ಚಂದನವನದ ತಾರೆಯರಿಂದ ನೃತ್ಯ

22 ಬೆಸ್ಟ್ ಅವಾರ್ಡ್ಸ್ 7 ಫೇವರೆಟ್ ಕ್ಯಾಟಗರಿ ಅವಾರ್ಡ್ಸ್ ಜತೆಗೆ ಸ್ಪೆಷಲ್ ಕ್ಯಾಟಗರಿಯಲ್ಲಿ ಜೀ ಕನ್ನಡ ಹಿರಿಯ ಸದಸ್ಯರಿಗೂ ಪ್ರಶಸ್ತಿ ನೀಡಲಾಗಿದೆ. ಇವುಗಳ ಜತೆಗೆ ಪ್ರಾಮಿಸಿಂಗ್ ನ್ಯೂ ಫೇಸ್ ಆಫ್ ಮೇಲ್ ಮತ್ತು ಫಿಮೇಲ್, ಸ್ಟೈಲ್ ಐಕಾನ್ (ಮೇಲ್ ಮತ್ತು ಫಿಮೇಲ್) ಪ್ರೈಡ್ ಆಫ್ ಜೀ ಕನ್ನಡ ಹೀಗೆ ನಲವತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ವರ್ಣರಂಜಿತ ಈ ವೇದಿಕೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರಾದ ರಾಗಿಣಿ  ದ್ವಿವೇದಿ, ಶಾನ್ವಿ, ಅಜಯ್ ರಾವ್ ಮತ್ತು ಜೀ ಕನ್ನಡ ಧಾರಾವಾಹಿ ಮತ್ತು ರಿಯಾಲಿಟಿ ಶೋ ಪ್ರತಿಭೆಗಳು ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ನವೆಂಬರ್ 3 ಮತ್ತು 4 ರಂದು (ಶನಿ-ಭಾನು) ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.ಸರ್‍ಪ್ರೈಸ್ ಕೊಡಲು ಬರಲಿದ್ದಾರೆ ಯಶ್ :

ರಾಕಿಂಗ್ ಸ್ಟಾರ್ ಯಶ್ `ಜೀ ಕನ್ನಡ ಕುಟುಂಬ ಅವಾರ್ಡ್ಸ್ 2018’ರ ವೇದಿಕೆಯಲ್ಲಿ ವಾಹಿನಿಯ ನೋಡುಗರಿಗೆ ಸರ್‍ಪ್ರೈಸ್ ನೀಡಲಿದ್ದಾರೆ. ಅದು ಯಾವ ರೀತಿಯ ಸರ್‍ಪ್ರೈಸ್ ಎನ್ನುವುದನ್ನು ಕಾದು ನೋಡಿ ಎಂದಿದ್ದಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು.

Tags

Related Articles