ಸುದ್ದಿಗಳು

ವೀಕೆಂಡ್ ನಲ್ಲಿ ವೀಕ್ಷಕರನ್ನು ರಂಜಿಸಲು ಮತ್ತೆ ಬಂತು “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಫ್ಯಾಮಿಲಿ ವಾರ್ ಸೀಸನ್ 2

ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ 7.5 ಟಿವಿಆರ್ ಗಳಿಸಿದ, ಜೀ ಕನ್ನಡದ ಅತ್ಯಂತ ಜನಪ್ರಿಯ ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್, ಹೊಸ ಸೀಸನಿನ್ನೊಂದಿಗೆ ಹೆಚ್ಚಿನ ಉತ್ಸಾಹವನ್ನೂ ತರಲಿದೆ. ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿ ಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಜೋಡಿ ಹಕ್ಕಿ, ಉಘೆ ಉಘೆ ಮಹಾದೇಶ್ವರ, ಸಾ ರೆ ಗಾ ಮಾ ಪಾ, ಡ್ರಾಮಾ ಜೂನಿಯರ್ಸ್ ಸೀಸನ್ 2 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 3 ಸೇರಿದಂತೆ, ಹಲವಾರು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಂದ ಹೊಸ ಪ್ರತಿಭಾವಂತರು ಫ್ಯಾಮಿಲಿ ವಾರ್ ಸೀಸನ್ ೨ರಲ್ಲಿ ಭಾಗವಹಿಸಲಿದ್ದಾರೆ. ಅತ್ಯುತ್ತಮವಾದ ನೃತ್ಯ ಅವತಾರಗಳನ್ನು ಪ್ರಸ್ತುತ ಪಡಿಸುವ ಗ್ರ್ಯಾಂಡ್ ಪ್ರೀಮಿಯರ್ ಬಿಡುಗಡೆಯು ಜುಲೈ 20 ರಂದು ರಾತ್ರಿ 9: 30 ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌ಡಿಯಲ್ಲಿ ಪ್ರಸಾರವಾಗಲಿದೆ.

ಅನಿಖಾ (ಕಮಲಿ) ಮತ್ತು ಪ್ರೀಥಮ್ (ಪಾರು),

ವಿಕಿ (ಗಟ್ಟಿಮೇಳ) ಮತ್ತು  ಅದಿತಿ (ಗಟ್ಟಿಮೇಳ),

ಪ್ರಶಾಂತ್ (ಆತ್ಮ ಬಂಧನ) ಮತ್ತು  ನೇತ್ರ (ಆತ್ಮ ಬಂಧನ)

ಸುಬ್ಬು (ಬ್ರಹ್ಮಗಂಟು) ಮತ್ತು ಪ್ರಣತಿ (ಬ್ರಹ್ಮಗಂಟು),

ಹನುಮಂತು (ಸಾ ರೆ ಗಾ ಮಾ ಪಾ 15) ಮತ್ತು ಶೈನಿ (ಸಾ ರೆ ಗಾ ಮಾ ಪಾ 15),

ಸೂರಜ್ (ಕಾಮಿಡಿ ಕಿಲಾಡಿಗಳು  ಸೀಸನ್ 2) ಮತ್ತು ಮಿಂಚು (ಕಾಮಿಡಿ ಕಿಲಾಡಿಗಳು  ಸೀಸನ್ 2),

ಬರ್ಕಾತ್ ಅಲಿ (ಕಾಮಿಡಿ ಕಿಲಾಡಿಗಳು  ಸೀಸನ್ 2) ಮತ್ತು ನಿಂಗಿ (ಕಮಲಿ),

ಲೋಕೇಶ್ (ಕಾಮಿಡಿ ಕಿಲಾಡಿಗಳು  ಸೀಸನ್ 1) ಮತ್ತು ಮಂಥನಾ (ಕಾಮಿಡಿ ಕಿಲಾಡಿಗಳು  ಸೀಸನ್ 2),

ವಿವೇಕ್ (ಮಹಾದೇವಿ) ಮತ್ತು ಹಿರಣ್ಮಯಿ (ಮಹಾದೇವಿ),

ಅನೂಪ್ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು ಡಿಂಪಾನಾ (ಡ್ರಾಮಾ  ಜೂನಿಯರ್ಸ್ ಸೀಸನ್ 3),

ಪ್ರೇಕ್ಷಿತ್ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು ಅನ್ವಿಶಾ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು

ನಂದಿತಾ (ಜೋಡಿಹಕ್ಕಿ) ಮತ್ತು ಅನುಪಮಾ (ಜನಪ್ರಿಯ ಆಂಕರ್), ಈ ಸೀಸನ್ನಿನ ಸ್ಪರ್ಧಿಗಳಾಗಿರುತಾರೆ.

ಜೀ ಕನ್ನಡ ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ಯುದ್ಧ ಸೀಸನ್ 2 ದೊಂದಿಗೆ ಮರಳಿದ್ದು ಇದು ಪ್ರೇಕ್ಷಕರನ್ನು ರಂಜಿಸಲು ಜೀ ಕನ್ನಡದ ಅತ್ಯಂತ ಪ್ರಸಿದ್ಧ ತಾರೆಯರನ್ನು ಹೊಂದಿದೆ. ಈ ಸೀಸನ್ ನ ಪ್ರಮುಖ ಆಕರ್ಷಣೆಯೆಂದರೆ ಜೀ ಕನ್ನಡದ ಸ ರಿ ಗ ಮ ಪ ಸೀಸನ್ 15 ರ  ಸ್ಪರ್ಧಿಗಳಲ್ಲಿ ಒಬ್ಬರಾದ ಪ್ರಥಮ ರನ್ನರ್ ಅಪ್ ಆಗಿರುವ ಹನುಮಂತ ಮರಳಿದ್ದಾರೆ. ಸ ರಿ ಗ ಮ ಪ ದ ಯಶಸ್ವಿ ಸೀಸನ್ ಮೂಲಕ, ಹನುಮಂತ ಜೀ ಕನ್ನಡದ ಮತ್ತೊಂದು ಗೌರವಾನ್ವಿತ ವೇದಿಕೆ ಪ್ರವೇಶಿಸಲಿದ್ದು ಸ್ಪರ್ಧೆಯ ಮಟ್ಟ ಎಂದಿನಂತೆ ಕುತೂಹಲಕಾರಿಯಾಗಲಿದೆ! ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ಯುದ್ಧ ಸೀಸನ್ 2 ಹನುಮಂತ ಮತ್ತು ಶೈನಿ (ಸ ರಿ ಗ ಮ ಪ 15) ಜೋಡಿ ಈ ಸೀಸನ್ ನಲ್ಲಿ ಸ್ಟೇಜ್ ಮೇಲೆ ಇತರ 11 ಶಕ್ತಿಶಾಲಿ ಜೋಡಿಗಳೊಂದಿಗೆ ಯುದ್ಧ ಮಾಡಲಿದ್ದಾರೆ!

Related image

ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಅವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಆಯೋಜಿಸಲಿದ್ದಾರೆ.

ಇದೇ ಜುಲೈ 20 ರಿಂದ ಪ್ರಾರಂಭವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಸೀಸನ್ 2, ಪ್ರತಿ ಶನಿವಾರ ಮತ್ತು ಭಾನುವಾರ  ರಾತ್ರಿ 9: 30 ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ಮತ್ತು ಜೀ ಕನ್ನಡ ಎಚ್ಡಿಯಲ್ಲಿ ಪ್ರಸಾರವಾಗಲಿದೆ.

Image may contain: 10 people, people smiling, people standing and outdoor

‘ಸೈಮಾ ಅವಾರ್ಡ್ಸ್’ 2019 ರಲ್ಲಿ ಅತೀ ಹೆಚ್ಚು ವಿಭಾಗದಲ್ಲಿ ಆಯ್ಕೆಯಾದ ನಮ್ಮ ಎರಡು ಕನ್ನಡ ಸಿನಿಮಾ!!

#balkaninews #sandalwood #kannadamovies #zeekannada #dkd #dkdrealityshow #dkdfamilywarseason2

Tags