ಸುದ್ದಿಗಳು

ಮತ್ತೇ ಬರಲು ರೆಡಿಯಾದ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್’ ಷಿಪ್!

ಜೀ ಕನ್ನಡದ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಈಗಷ್ಟೇ ಮುಗಿದಿರುವುದು ನಮಗೆಲ್ಲಾ ತಿಳಿದಿದೆ. ಎರಡನೇ ಆವೃತ್ತಿಯಲ್ಲಿ ಮಡೆನೂರು ಮನು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಕಾಮಿಡಿ ಕಿಲಾಡಿಗಳು ಶೋ ವಿನ ಎರಡನೇ ಸೀಸನ್ ಮುಗಿಯುತ್ತಿದ್ದಂತೆ ಮತ್ತೊಂದು ಹೊಸ ಶೋ ಆರಂಭವಾಗುತ್ತಿದೆ.

ಹೌದು. ನಿಮ್ಮ ನೆಚ್ಚಿನ ಝೀ ಕನ್ನಡದಲ್ಲಿ ಮತ್ತೊಂದು ಹಾಸ್ಯ ಕಾರ್ಯಕ್ರಮ ಆರಂಭವಾಗಲಿದೆ. ‘ಕಾಮಿಡಿ ಕಿಲಾಡಿಗಳು’ ಎರಡು ಆವೃತ್ತಿಯ ಸ್ಪರ್ಧಿಗಳು ಒಟ್ಟಿಗೆ ಭಾಗವಹಿಸಲಿರುವ ಈ ಶೋ ಹೆಸರು ‘ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್’. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು,ವೀಕ್ಷಕರ ಗಮನ ಸೆಳೆಯುತ್ತಿದೆ. ಪ್ರೋಮೋದಲ್ಲಿ ಶಿವರಾಜ್ ಕೆ.ಆರ್ ಪೇಟೆ, ದಿವ್ಯ, ಮಡನೂರು ಮನು ಕಾಣಿಸಿಕೊಂಡಿದ್ದಾರೆ.

ಮೊದಲೆರಡು ಕಾರ್ಯಕ್ರಮದಂತೆ ಈ ಕಾರ್ಯಕ್ರಮದಲ್ಲೂ ಅದೇ ತೀರ್ಪುಗಾರರು ಮುಂದುವರೆಯಲಿದ್ದಾರೆ. ನವರಸ ನಾಯಕ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ಈ ಶೋ ಗೆ ಆನಂದ್ ಅವರ ನಿರೂಪಣೆಯಿದೆ.

ಜುಲೈ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್’ ಪ್ರಸಾರವಾಗಲಿದೆ.

25-06-18

ನಗೋದಕ್ಕೂ ಚೌಕಾಸಿ ಮಾಡುವ ಈ ಕಾಲದಲ್ಲಿ ಮತ್ತೆ ಎಲ್ಲರನ್ನು ಮನತುಂಬಿ ನಗಿಸೋ ಹೋರಾಟಕ್ಕೆ ಸಿದ್ಧವಾಗಿದ್ದಾರೆ ನಮ್ಮ ಕಿಲಾಡಿ ಚಾಂಪಿಯನ್ಸ್. ಶುರುವಾಗುತ್ತಿದೆ ಕಾಮಿಡಿ ಕಿಲಾಡಿಗಳು Championship. ಜುಲೈ 7 ರಿಂದ ಶನಿ – ಭಾನು ರಾತ್ರಿ 9 ಕ್ಕೆ#ZeeKannada #ComedyKhiladigaluChampionship

Posted by Zee Kannada on Sunday, June 24, 2018

Tags

Related Articles