ವೈರಲ್ ನ್ಯೂಸ್ಸುದ್ದಿಗಳು

ಗಜರಾಜ ಆನೆ ಹಾರಿಸುತ್ತಿರುವ ಕನ್ನಡದ ಬಾವುಟ: ವಿಡಿಯೋ ವೈರಲ್

ನವೆಂಬರ್ 1 ರಂದು ರಾಜ್ಯದೆಲ್ಲೆಡೆ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹಾಗೆಯೇ ಈ ತಿಂಗಳ ಪೂರ್ತಿಯೂ ಸಹ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ಅಂದ ಹಾಗೆ ನಿನ್ನೆ ರಾತ್ರಿ ಕರ್ನಾಟಕ ರಾಜ್ಯೋತ್ಸವವನ್ನು ಗಜರಾಜನೊಂದಿಗೆ ಆಚರಿಸಲಾಗಿದೆ. ವಿಶೇಷವೆಂದರೆ ಆನೆಯು ಕರ್ನಾಟಕದ ಬಾವುಟವನ್ನು ಸೊಂಡಿಯಲ್ಲಿ ಹಿಡಿದು ಹರ್ಷದಿಂದ  ಕುಣಿದಾಡಿದೆ.

‘ಕನ್ನಡದ ಅಲೆ ಎಲ್ಲೆಲ್ಲೂ ಝೇಂಕರಿಸಲಿ ಏರಲಿ.. ಹಾರಲಿ ಕನ್ನಡದ ಬಾವುಟ.. ಗಜರಾಜ ಹಾರಿಸುತ್ತಿರುವ ಕನ್ನಡದ ಬಾವುಟ’ ಎಂಬ ಟ್ಯಾಗ್ ಲೈನ್ ನಲ್ಲಿ ಈ ವಿಡಿಯೋವನ್ನು ರೂಪೇಶ್ ರಾಜಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ನೋಡಿ ಸ್ವಾಮಿ ನಾವಿರೋದೇ ಹೀಗೆ: ಶಂಕರ್ ನಾಗ್ ಡ್ರಾಮಾ ವಿಡಿಯೋ ವೈರಲ್

#Elephant #KanandaRajyosthava  #KanandaFlag #kannadaSuddigalu

Tags