ವೈರಲ್ ನ್ಯೂಸ್ಸುದ್ದಿಗಳು

ಉದಾರತೆ ತೋರಿದ ದಾದಾ..!!

ನಿರ್ಗತಿಕರ ಹೊತ್ತಿನ ಊಟಕ್ಕೆ ನೆರವಾದ ಗಂಗೂಲಿ...

ಎಲ್ಲೇ ನೋಡಿದರೂ ಈಗಂತು ಕರೋನಾದ್ದೇ ಸದ್ದು..ಪ್ರಪಂಚದ ೧೭೦ಕ್ಕೂ ಅಧಿಕ ದೇಶಗಳಿಗೆ ಕರೋನ ಬಿಸಿ ಅತಿಯಾಗೇ ತಟ್ಟಿದೆ. ಸಾವಿರಾರು ಜನ ನೋಡುನೋಡುತ್ತಿದ್ದಂತೆ ಜೀವವನ್ನೇ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ಸೋಂಕಿನಿಂದ ಬಳಲುತ್ತಿದ್ದಾರೆ. ಸಾವಿನ ಸಂಖ್ಯೆ ದಿನ ದಿನವೂ ಹೆಚ್ಚುತ್ತಲೇ ಇದೆ. ಈ ಭಯಾನಕ ಸೋಂಕಿನಿಂದ ದೇಶ ರಕ್ಷಿಸಲು ಪ್ರಧಾನಿ ಮೋದಿ ಭಾರತವನ್ನೇ 21 ದಿನ ಲಾಕ್ ಡೌನ್ ಮಾಡಲು ಆದೇಶವನ್ನೂ ಕೊಟ್ಟಿದ್ದಾರೆ.

ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಅನೇಕ ನಿರ್ಗತಿಕರು ಸರ್ಕಾರಿ ಶಾಲೆಗಳಲ್ಲಿ ವಾಸವಿದ್ದಾರೆ. ಇಂತಹ ಬಡ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುವಂತಾಗಿರುವಾಗ..ಇವರ ನೆನಪಿಗೆ ಸಹಾಯ ಹಸ್ತ ಚಾಚಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.ಯೆಸ್, ಕರೋನ ಮುಕ್ತ ಭಾರತಕ್ಕಾಗಿ ೨೧ ದಿನಗಳ ಕಾಲ ಭಾರತ್ ಬಂದ್ ಆಗಿದ್ದು, ಇದರಿಂದ ಬಳಲುತ್ತಿರುವ ದೀನದಲಿತರಿಗೆ 50 ಲಕ್ಷ ಮೌಲ್ಯದ ಅಕ್ಕಿ ನೀಡಲಿದ್ದಾರೆ ಗಂಗೂಲಿ.

ನಿರ್ಗತಿಕರ ಸುರಕ್ಷತೆಗಾಗಿ ಗಂಗೂಲಿ ಅವರು ನೀಡಿರುವ ಕೊಡುಗೆ ಬಹಳ ದೊಡ್ಡದು. ಹಾಗೆಯೇ ಗಂಗೂಲಿ ಅವರ ಈ ನಡೆ ಇತರರ ಮೇಲೂ ಪ್ರಭಾವ ಬೀರಿ..ಇನ್ನಷ್ಟು ಮಂದಿ ಬಡವರ ಕಷ್ಟಕ್ಕೆ ನೆರವಾಗಲು ಮುಂದೆ ಬರಲಿ..ಗಂಗೂಲಿ ಅವರು ತೆಗೆದುಕೊಂಡಿರುವ ನಿರ್ಧಾರ ಅಭೂತಪೂರ್ವ ಆದುದು ಎಂದು ಶ್ಲಾಘಿಸಿದ್ದಾರೆ ಬಿಸಿಸಿಐ ಕಾರ್ಯದರ್ಶಿ ಸ್ನೇಹಶಿಸ್.

130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈ ವರೆಗೂ 600 ಕ್ಕೂ ಹೆಚ್ಚು ಕರೋನ ಸೋಂಕಿತರಿರುವುದು ಧೃಡಪಟ್ಟಿದೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಾವಿನ ಗ್ರಾಫ್ ದಿನ ದಿನವೂ ಹೆಚ್ಚುತ್ತಲೇ ಇದ್ದು, ಸೋಂಕಿತರಲ್ಲಿ ೧೨ ಜನ ಮೃತಪಟ್ಟಿದ್ದಾರೆ.

Tags