ವೈರಲ್ ನ್ಯೂಸ್ಸುದ್ದಿಗಳು

ನಮ್ಮ ನೆಲದ ಹಾಡನ್ನು ಹೇಳಿ ಕನ್ನಡಿಗರ ಮನಗೆದ್ದ ಜಪಾನಿಯರು

ಕನ್ನಡದ ಭಾಷೆಯು ಬರೆಯಲು ಓದಲು ಬಹಳ ಚಂದ. ಅದರಲ್ಲೂ ಪರಭಾಷೆಯ ಜನರು ಆಸಕ್ತಿಯಿಟ್ಟು ನಮ್ಮ ಭಾಷೆಯನ್ನು ಕಲಿತು ಹಾಡುತ್ತಾರೆಂದರೆ ಅದೆಷ್ಟು ಚಂದ ಅಲ್ಲವೇ..?. ಅಂದ ಹಾಗೆ ನಿನ್ನೆ (ನ.24) ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಜಪಾನೀಸ್ ಪುಡ್ ಫೆಸ್ಟಿವಲ್ ನಲ್ಲಿ ವರನಟ ಡಾ. ರಾಜಕುಮಾರ್ ರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡನ್ನು ಹಾಡಿದ್ದಾರೆ.

ವಿಶೇಷವೆಂದರೆ ಈ ಹಾಡನ್ನು ಹಾಡುತ್ತಾ  ಸ್ಟೆಪ್ ಹಾಕಿದ್ದಾರೆ. ಜಪಾನಿಯರ ಕನ್ನಡ ಪ್ರೇಮವನ್ನು ನಮ್ಮವರು ಕಂಡು ಅವರ ಮೇಲೆ ವಿಶೇಷ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಸದ್ಯ ಅವರು ವಿಡಿಯೋ ಹಾಡೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ ಹಾಗೆ ಈ ಹಾಡು ‘ಆಕಸ್ಮಿಕ’ ಚಿತ್ರದ್ದು. ಡಾ. ರಾಜ್ ರಾಜ್ ಕುಮಾರ್, ಮಾಧವಿ, ಗೀತಾ ಸೇರಿದಂತೆ ಅನೇಕರು ಅಭಿನಯಿಸಿದ್ದು, ಹಂಸಲೇಖಾ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ.

ಹುಡುಗರ ಕಥೆ ಹೇಳಲು ಮೈಸೂರಿನಿಂದ ಬಂದ ರಾಧ್ಯಾ

#KannadaMovieSong #Rajkumar  #Akasmika #Japaneses

Tags