ವೈರಲ್ ನ್ಯೂಸ್

ಶಾಲಾ ಮಕ್ಕಳ ಈ ಫೋಟೋ ವೈರಲ್

ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಕಟ್ಟಿತ್ತು. ಅರ್ಜುನನ ಮೇಲೆ ಚಾಮುಂಡೇಶ್ವರಿಯ ಜಂಬೂ ಸವಾರಿಯು ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಿತು. ಇದೀಗ ಸೋಶೀಯಲ್ ಮೀಡಿಯಾಗಳಲ್ಲಿ ಫೋಟೋವೊಂದು ಸಖತ್ ವೈರಲ್ ಆಗಿದೆ.

ಹೌದು, ದುರ್ಗಾಮಾತೆಯು ಮಹಿಷಾಸುರನನ್ನು ಸಂಹರಿಸುವ ರೀತಿಯಲ್ಲಿ  ಶಾಲಾ ಮಕ್ಕಳು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋದಲ್ಲಿ ಮಕ್ಕಳು ಶಾಲಾ ಸಮವಸ್ತ್ರವನ್ನು ಧರಿಸಿದ್ದು, ಬಗೆ ಬಗೆಯ ಆಯುಧಗಳನ್ನು ಕೈಯಲ್ಲಿ ಹಿಡಿದು ಅದ್ಭುತವಾಗಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ಶಾಲಾ ಮಕ್ಕಳ ಹೊಸ ತನದ ಪ್ರಯತ್ನಕ್ಕೆ ಸೋಶೀಯಲ್ ಮೀಡಿಯಾಗಳಲ್ಲಿ ಬಹಳಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಡಿಯೋ ವೈರಲ್: ಕುರಿ ಕಾಯುವವನ ಕಂಠದಲ್ಲಿ ಬಾಲಿವುಡ್ ಹಾಡು

Tags