ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ಮೊಬೈಲ್ ನಲ್ಲಿ ಮಾತನಾಡುತ್ತಾ ರೈಲಿನ ಮುಂದೆಯೇ ಬಿದ್ದ ಮಹಿಳೆ, ಮುಂದೇನಾಯ್ತು?

ಮೊಬೈಲ್ ನಲ್ಲಿ ಮಾತನಾಡುವುದು ಕೆಲವರಿಗೆ ಎಷ್ಟರಮಟ್ಟಿಗೆ ಚಟವಾಗಿರುತ್ತದೆ ಎಂದರೆ ಎದುರುಗಡೆ ಯಾವ ವಸ್ತು ಇರುತ್ತದೆ?, ಯಾರು ಬರುತ್ತಿರುತ್ತಾರೆ? ಅಕ್ಕ ಪಕ್ಕ ಏನಿರುತ್ತದೆ ಎಂಬ ಜ್ಞಾನ ಇರುವುದಿಲ್ಲ.

ಇನ್ನು ಈ ಸುದ್ದಿ ಓದಿದರೆ ನೀವು ಜನ ಹೀಗೂ ಇರುತ್ತಾರಾ ಅಂದುಕೊಳ್ಳುತ್ತೀರಿ. ಅಷ್ಟಕ್ಕೂ ಆಗಿದ್ದು ಇಷ್ಟು…ಸ್ಪೇನ್‌ನ ಮ್ಯಾಡ್ರಿಡ್ ಮೆಟ್ರೊದ ಪ್ಲಾಟ್ ಫಾರ್ಮ್ ಬಳಿ ಮಹಿಳೆಯೊಬ್ಬಳು ಫೋನ್‌ ನಲ್ಲಿ ಮಾತನಾಡುತ್ತಿದ್ದಳು.

ಮಾತನಾಡುತ್ತಾ ನೇರವಾಗಿ ಮುಂದೆ ನಡೆದು ಹೋದಾಗ ರೈಲಿನ ಮುಂದೆಯೇ ಹಳಿಗಳ ಮೇಲೆ ಬಿದ್ದಳು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎದೆ ಝುಲ್ ಎನಿಸುತ್ತದೆ.

ಅದೃಷ್ಟವಶಾತ್ ಅವಳು ಹಳಿಗಳ ಮೇಲೆ ಬಿದ್ದಾಗ ಸಾಕಷ್ಟು ದೂರದಲ್ಲಿದ್ದ ರೈಲು ನಿಂತುಹೋಯಿತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮ್ಯಾಡ್ರಿಡ್ ಮೆಟ್ರೋ ಬಿಡುಗಡೆ ಮಾಡಿದ ಈ ವಿಡಿಯೋವನ್ನು ಆರ್‌ಟಿಇ ನ್ಯೂಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ವೀಕ್ಷಿಸಿ…

ವಿಡಿಯೋ: ಕೈ ಕೈ ಹಿಡಿದು ಕುಣಿದು ಕುಪ್ಪಳಿಸಿದ ಹಿರಿಯ ಜೀವಗಳು

#balkaninews #metro #madridmetro #spain

Tags